ಬೆಳ್ತಂಗಡಿ ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷ ಸಂತೋಷ್‌ ಕುಮಾರ್ ಆತ್ಮಹತ್ಯೆ!

0
115

ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಯಿಲದ ಆದರ್ಶ ನಗರದ ಸರಕಾರಿ‌ ಬಾವಿ ಬಳಿ ಅವರ ಆಟೋ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾವಿಗೆ ಹಾರಿ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಜಿರೆ ಬೆಳ್ತಂಗಡಿ ಅಪೆ ರಿಕ್ಷಾ ಚಾಲಕ ಮಾಲಕರ‌ ಸಂಘದ ಪದಾಧಿಕಾರಿಯಾಗಿದ್ದರು ಸಂತೋಷ್‌.

ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ, ಲಾಯಿಲ ನಿವಾಸಿ ಸಂತೋಷ್ ಕುಮಾರ್ ಅವರು ಶನಿವಾರ ಲಾಯಿಲ ಗ್ರಾಮದ ಆದರ್ಶ ನಗರದ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಂತ ಅಟೋ ರಿಕ್ಷಾ ಹೊಂದಿದ್ದ ಸಂತೋಷ್ ಅವರು
ಕೆಲ‌ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿ ಸೊಂಟದಿಂದ ಕೆಳಗೆ ಸ್ವಾಧೀನ‌ ಕಳೆದುಕೊಂಡು ಮಲಗಿದ್ದಲ್ಲೇ ಇದ್ದರು.

LEAVE A REPLY

Please enter your comment!
Please enter your name here