ರಾತ್ರೋ ರಾತ್ರಿ ಮಂಡ್ಯದ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ

ಮಂಡ್ಯ: ಕಾಂಗ್ರೆಸ್ ನಾಯಕಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಭಾನುವಾರ ರಾತ್ರೋ ರಾತ್ರಿ ಮಂಡ್ಯದಲ್ಲಿನ ಮನೆಯನ್ನು ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ಮಂಡ್ಯ ಜಿಲ್ಲೆಯ ವಿದ್ಯಾನಗರದಲ್ಲಿ ಮನೆ ಮಾಡಿದ್ದ ರಮ್ಯಾ, ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಸಾಗಿಸಿದ್ದಾರೆ ಎನ್ನಲಾಗಿದೆ. ರಾತ್ರಿ ಹತ್ತು ಗಂಟೆಯಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಮನೆಯಲ್ಲಿದ್ದ ವಸ್ತುಗಳನ್ನು ತುಂಬಿಕೊಂಡು ಹೋಗಿದ್ದಾರೆ. ಈ ವೇಳೆ ರಮ್ಯಾ ಮನೆಮುಂದೆ ಐದಾರು ಪೊಲೀಸರಿಂದ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು ಎಂದು ಹೇಳಲಾಗಿದೆ.

Comments

comments