ಅಬುಧಾಬಿಯ ‘ಡಿಯರ್​ ಬಿಗ್​​ ಟಿಕೆಟ್​​’ ವಿಜೇತರಾದ ಹನೀಫ್​ ಪುತ್ತೂರು!

ಮಂಗಳೂರು: ಯುಎಇಯ ಅಬುಧಾಬಿ ಡ್ಯೂಟಿ ಫ್ರೀ, ಏಷ್ಯಾನೆಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಡಿಯರ್ ಬಿಗ್ ಟಿಕೆಟ್’ ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಆರ್ಯಾಪು ಗ್ರಾಮದ ನಿವಾಸಿ ಮಹಮ್ಮದ್ ಹನೀಫ್ ವಿಜೇತರಾಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಹನೀಫ್ ಪುತ್ತೂರು ಅವರು ದುಬೈ ಯುನಿವರ್ಸಿಟಿಯ ಮಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್ ಲ್ಯಾಬ್​ನಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದು, ಮಂಗಳೂರು ಎಂ ಫ್ರೆಂಡ್ಸ್ ಟ್ರಸ್ಟ್​ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Comments

comments