ಇನ್ಮುಂದೆ ಐಫೋನ್ ಬಳಕೆದಾರರಿಗೂ ಲಭ್ಯ ಟ್ರಾಯ್‌ ‘DND’ ಆಪ್!!

ಟ್ರಾಯ್ ಮತ್ತು ಆಪಲ್ ಸಂಸ್ಥೆಯ ಶೀತಲ ಸಮರದಲ್ಲಿ ಆಪಲ್ ಕಂಪೆನಿ ತಲೆಬಾಗಿದೆ. ಭಾರತದಲ್ಲಿ ಇದೀಗ ಐಫೋನ್ ಬಳಕೆದಾರರು ಕೂಡ ‘ಡು ನಾಟ್ ಡಿಸ್ಟರ್ಬ್’ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಆಪ್ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಟ್ರಾಯ್ ತಿಳಿಸಿದೆ. ಇದೇ ವಾರಾಂತ್ಯದಲ್ಲಿ ‘ಡು ನಾಟ್ ಡಿಸ್ಟರ್ಬ್-DND’ ಐಒಎಸ್ ಆಪ್ ಸ್ಟೋರ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಮೊಬೈಲ್ ವಿಕಿರಣ ಸಾವಿನ ಕೂಪಕ್ಕೆ ತಳ್ಳುತ್ತಿದೆಯಾ?

ಮೊಬೈಲ್ ಫೋನ್‌ಗಳ ತರಂಗಾಂತರಗಳು ಅಪಾಯಕರ ಎಂಬುದನ್ನು ಯಾವುದೇ ಸಂಶೋಧನೆ ಕೂಡ ಈವರೆಗೂ ಸಾಬೀತುಪಡಿಸಿಲ್ಲ. ಆದರೆ ಕೆಲವು ಅಧ್ಯಯನಗಳ ಮೂಲಕ ಈ ಕಿರಣಗಳು ಕೊಂಚವಾದರೂ ಆಪಾಯಕಾರಕ ಎಂದು ಹೇಳಿವೆ. ಸತತ ಬಳಕೆಯಿಂದ ಮೊಬೈಲಿನಿಂದ ಹೊರಹೊಮ್ಮುವ ವಿಕಿರಣಗಳು ನಮ್ಮ ಪ್ರತಿ ಜೀವಕೋಶದ ಡಿಎನ್ಎ ಅಥವಾ ಜೀವತಂತುಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಪ್ರಾಯಪಟ್ಟಿವೆ.ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಸಹಾ ವಿಕಿರಣಗಳ ಮೂಲಕ ಉಲ್ಬಣಗೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಅಯೋಧ್ಯೆ ರಾಮಮಂದಿರ ಜಪ: ಸುಳ್ಯದಲ್ಲಿ ವೆಂಕಪ್ಪ ಗೌಡ

ಸುಳ್ಯ: “ಚುನಾವಣೆ ಹತ್ತಿರ ಬಂದಾಗ ಬಿಜೆಪಿಗರು ಅಯೊಧ್ಯೆಯ ರಾಮಮಂದಿರದ ಜಪ ಮಾಡುತ್ತಿದ್ದಾರೆ. ನಿಜವಾದ ಕಾಳಜಿ ಇದ್ದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಬಿಜೆಪಿ ಮತ್ತು ಸಂಘ ಪರಿವಾರದವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿರುದ್ದ ಜನಾಗ್ರಹ ಸಭೆ ನಡೆಸಲಿ. ಈಗ ಅಲ್ಲಲ್ಲಿ ನಡೆಯುತ್ತಿರುವ ಜನಾಗ್ರಹ ಸಭೆಯು ಮುಂದಿನ ಚುನಾವಣಾ ದೃಷ್ಟಿಯಿಂದ ನಡೆಸುವ ನಾಟಕ” ಎಂದು ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಟೀಕಿಸಿದ್ದಾರೆ.

ಮನೆ ವಿಚಾರಕ್ಕೆ ಮತ್ತೆ ದುನಿಯಾ ವಿಜಯ್ ಕುಟುಂಬದ ನಡುವೆ ಕಿತ್ತಾಟ

ಬೆಂಗಳೂರು : ಮನೆ ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ದುನಿಯಾ ವಿಜಯ್ ಕುಟುಂಬದ ನಡುವೆ ಮತ್ತೆ ಕಿತ್ತಾಟ ಶುರುವಾಗಿದೆ. ನಾಗರತ್ನ ಮನೆಗಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿಯನ್ನು ಭೇಟಿಯಾಗಿ ತಮ್ಮ ಪತಿ ವಿಜಿ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಹಿಂಭಾಗದಲ್ಲಿರೋ ದುನಿಯಾ ವಿಜಿ ಮನೆಯಿದ್ದು, ವಿಜಿ ತನಗೆ ಹೇಳದೇ ತಮ್ಮ ಮನೆಯನ್ನು ಸ್ನೇಹಿತ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರಿಗೆ ಮಾರಿದ್ದಾರೆ ಎಂದು ನಾಗರತ್ನ ಆರೋಪಿಸಿದ್ದಾರೆ.

ಮಗಳು ‘ಝೀವಾ’ ಜೊತೆ ಧೋನಿ ಮಸ್ತ್ ಡಾನ್ಸ್

ಮುಂಬೈ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಸೂಪರ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮಗಳು ಝೀವಾ ಧೋನಿ ಜೊತೆ ಮಸ್ತ್ ಡಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ಈ ವಿಡಿಯೋವನ್ನು ಎಂ.ಎಸ್. ಧೋನಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪತ್ನಿಯಿಂದಲೇ ಕೋ. ರೂ. ಬೇಡಿಕೆ; ಕೊಲೆ ಬೆದರಿಕೆ

ಮಂಗಳೂರು: ಪತಿಗೇ ಜೀವ ಬೆದರಿಕೆ ಕರೆ ಮಾಡಿ ಬರೋಬ್ಬರಿ 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಅಪರೂಪದ ಪ್ರಕರಣವೊಂದರಲ್ಲಿ ಮಣಿಪಾಲ ಅನಂತನಗರದ ನಿವಾಸಿ ಅಂಬಿಕಾ ನಾಯಕ್‌ ಯಾನೆ ಅಂಬಿಕಾ ಪ್ರಭುವಿನ ತಂದೆ ಕೆ. ವಾಸುದೇವ ಪ್ರಭುವನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾಗಿರುವ ಅಂಬಿಕಾ ನಾಯಕ್‌ ಹಾಗೂ ಆಕೆಯ ಸ್ನೇಹಿತ ಮಂಡ್ಯ ಜಿಲ್ಲೆಯ ಬಿ. ಮಂಜುನಾಥ್‌ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರಿಸಿದ್ದಾರೆ.

ನಾಪತ್ತೆಯಾಗಿದ್ದ ಮಂಗಳೂರಿನ ವಿದ್ಯಾರ್ಥಿ ಕೇರಳದಲ್ಲಿ ಪತ್ತೆ

ಮಂಗಳೂರು : ಮಂಗಳೂರಿನ ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೊಂದಿಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ಧಿಢೀರ್ ನಾಪತ್ತೆ ಪ್ರಕರಣ ವಿನಾಯಕ್ ಪತ್ತೆಯಾಗುವ ಮೂಲಕ ಸುಖಾಂತ್ಯ ಕಂಡಿದೆ. ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರ ಜೊತೆ ಕೆಲಸ ಮಾಡುತ್ತಿದ್ದ ಶಕ್ತಿನಗರದ ವಿನಾಯಕ್‌ ಎಂಬ ಯುವಕ ದಿಢೀರ್ ನಾಪತ್ತೆಯಾಗಿದ್ದು, ಇದೀಗ ಅತನನ್ನು ಕೇರಳದ ಕೊಚ್ಚಿನ್‌ ಪೊಲೀಸರು ಪತ್ತೆ ಮಾಡಿ ಉರ್ವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕೃಷಿ ಅಭಿವೃದ್ಧಿ ಇಲಾಖೆಯ ತರಕಾರಿ ಮಾರುಕಟ್ಟೆ ಮೂಲೆಗುಂಪು

ಕಾಸರಗೋಡು: ಮುಳಿಯಾರು ಕೃಷಿ ಇಲಾಖೆ ಆರಂಭಿಸಿದ ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆಯ ಎ ಗ್ರೇಡ್‌ ತರಕಾರಿ ಕ್ಲಸ್ಟರ್‌ ಮಾರುಕಟ್ಟೆ ಮೂಲೆಗುಂಪಾಗುತ್ತಿದೆ. ತಿಂಗಳುಗಳ ಹಿಂದೆ ಕೃಷಿ ಇಲಾಖೆ ಅಧಿಕಾರಿಗಳು ಬೋವಿಕ್ಕಾನ ಪೇಟೆಯಲ್ಲಿ ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆಯ ಎ ಗ್ರೇಡ್‌ ತರಕಾರಿ ಕ್ಲಸ್ಟರ್‌ ಮಾರುಕಟ್ಟೆಯನ್ನು ಆರಂಭಿಸಿದ್ದರು. ಆದರೆ ತರಕಾರಿ ಮಾರುಕಟ್ಟೆ ಆರಂಭಗೊಂಡಲ್ಲಿಂದ ಈ ಮಾರುಕಟ್ಟೆ ಮುಚ್ಚುಗಡೆಗೊಂಡಿದೆ.

ಅಬುಧಾಬಿಯ ‘ಡಿಯರ್​ ಬಿಗ್​​ ಟಿಕೆಟ್​​’ ವಿಜೇತರಾದ ಹನೀಫ್​ ಪುತ್ತೂರು!

ಮಂಗಳೂರು: ಯುಎಇಯ ಅಬುಧಾಬಿ ಡ್ಯೂಟಿ ಫ್ರೀ, ಏಷ್ಯಾನೆಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಡಿಯರ್ ಬಿಗ್ ಟಿಕೆಟ್’ ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಆರ್ಯಾಪು ಗ್ರಾಮದ ನಿವಾಸಿ ಮಹಮ್ಮದ್ ಹನೀಫ್ ವಿಜೇತರಾಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಹನೀಫ್ ಪುತ್ತೂರು ಅವರು ದುಬೈ ಯುನಿವರ್ಸಿಟಿಯ ಮಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್ ಲ್ಯಾಬ್​ನಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದು, ಮಂಗಳೂರು ಎಂ ಫ್ರೆಂಡ್ಸ್ ಟ್ರಸ್ಟ್​ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹವಾಮಾನ ಬದಲಾವಣೆ ವಿರುದ್ಧ ಸಮರ ಸಾರಿದ ವಿಶ್ವಬ್ಯಾಂಕ್: 200 ಶತಕೋಟಿ ಡಾಲರ್ ನೆರವು ಘೋಷಣೆ

ಕಟೊವೈಸ್: ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಹವಾಮಾನ ಬದಲಾವಣೆ ವಿರುದ್ದ ಸಮರ ಸಾರಿರುವ ವಿಶ್ವಬ್ಯಾಂಕ್, ಇದಕ್ಕಾಗಿ ತಾನು ನೀಡುತ್ತಿದ್ದ ನೆರವನ್ನು ಸೋಮವಾರ ದುಪ್ಪಟ್ಟುಗೊಳಿಸಿದೆ. 2021-25ರ ಅವಧಿಯ ಹವಾಮಾನ ಹೂಡಿಕೆ ಕ್ರಿಯಾ ಯೋಜನೆಗೆ ವಿಶ್ವಬ್ಯಾಂಕ್ ದುಪ್ಪಟ್ಟು ನೆರವು ಅಂದರೆ, 200 ಶತಕೋಟಿ ಡಾಲರ್ ನೆರವು ಘೋಷಣೆ ಮಾಡಿದೆ.