ಒಡಿಶಾ, ಆಂಧ್ರ ಕರಾವಳಿಯಲ್ಲಿ ತಿತ್ಲಿ ಅಬ್ಬರ – ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ!

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಒಡಿಶಾ, ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತ ತೀವ್ರಗೊಂಡಿದೆ. ಗಂಟೆಗೆ 145 ಕಿಮೀ ವೇಗದಲ್ಲಿ ಗಾಳಿ ಬೀಸ್ತಿದೆ. ಮುಂದಿನ 18 ಗಂಟೆಗಳಲ್ಲಿ ಅದು ಮತ್ತಷ್ಟು ತೀವ್ರಗೊಳ್ಳಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಒಡಿಶಾ ಸರ್ಕಾರ ಕರಾವಳಿಯ ತಟದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಅಲ್ಲದೇ ಶಾಲೆ-ಕಾಲೇಜಿಗೂ ರಜೆ ಘೋಷಿಸಲಾಗಿದೆ.

#MeToo ಅಭಿಯಾನ ಬೆಂಬಲಿಸಿ ಮುಂದಿನ ಚಿತ್ರ ನಿರ್ಮಾಣ ಕೈಬಿಟ್ಟ ಅಮೀರ್ ಖಾನ್!

ನವದೆಹಲಿ: ಬಾಲಿವುಡ್ ಮೇರು ನಟರಲ್ಲಿ ಒಬ್ಬರಾದ ಆಮೀರ್​ ಖಾನ್​ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ “ಮೀಟೂ” ಅಭಿಯಾನವನ್ನು ಬೆಂಬಲಿಸಿ ತಮ್ಮ ನಿರ್ಮಾಣ ಸಂಸ್ಥೆಯ ಮುಂದಿನ ಯೋಜನೆ ಕೈಬಿಟ್ಟಿದ್ದಾರೆ. ನಿರ್ದೇಶಕ ಸುಭಾಷ್​ ಕಪೂರ್​ ಸಾರಥ್ಯದಲ್ಲಿ ಗುಲ್ಶನ್​ ಕುಮಾರ್​ ಜೀವನಾಧಾರಿತ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದ ನಟ ಈಗ ಈ ಯೋಜನೆ ಕೈಬಿಟ್ಟಿದ್ದಾಗಿ ಘೋಷಿಸಿದ್ದಾರೆ.