ರಾಮಮಂದಿರ ಹಕ್ಕು: ಪಲಿಮಾರು ಶ್ರೀ

ಪಾಕಿಸ್ತಾನ, ಚೀನಾದಲ್ಲಿ ಮಂದಿರ ನಿರ್ಮಿಸಿ ಎಂದು ನಾವು ಕೇಳುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಮಗೆ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ್ರಹಿಸಿ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷತ್ ಆಯೋಜಿಸಿದ್ದ ಬೃಹತ್ ಜನಾಗ್ರಹ ಸಭೆಯಲ್ಲಿ ಅವರು ಭಾನುವಾರ ಆಶೀರ್ವಚನ ನೀಡಿದರು.

ರಾತ್ರೋ ರಾತ್ರಿ ಮಂಡ್ಯದ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ

ಮಂಡ್ಯ: ಕಾಂಗ್ರೆಸ್ ನಾಯಕಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಭಾನುವಾರ ರಾತ್ರೋ ರಾತ್ರಿ ಮಂಡ್ಯದಲ್ಲಿನ ಮನೆಯನ್ನು ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ಮಂಡ್ಯ ಜಿಲ್ಲೆಯ ವಿದ್ಯಾನಗರದಲ್ಲಿ ಮನೆ ಮಾಡಿದ್ದ ರಮ್ಯಾ, ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಸಾಗಿಸಿದ್ದಾರೆ ಎನ್ನಲಾಗಿದೆ. ರಾತ್ರಿ ಹತ್ತು ಗಂಟೆಯಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಮನೆಯಲ್ಲಿದ್ದ ವಸ್ತುಗಳನ್ನು ತುಂಬಿಕೊಂಡು ಹೋಗಿದ್ದಾರೆ. ಈ ವೇಳೆ ರಮ್ಯಾ ಮನೆಮುಂದೆ ಐದಾರು ಪೊಲೀಸರಿಂದ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು ಎಂದು ಹೇಳಲಾಗಿದೆ.

ಭಕ್ತ ಜನಸಾಗರವಾದ ಉಜಿರೆ-ಧರ್ಮಸ್ಥಳ ರಾಜಮಾರ್ಗ

ಬೆಳ್ತಂಗಡಿ: ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸನ್ನಿಧಿಯ ಲಕ್ಷದೀಪೋತ್ಸವದ ಮೊದಲ ದಿನವಾದ ರವಿವಾರ ಭಕ್ತರಿಂದ ಉಜಿರೆ-ಧರ್ಮಸ್ಥಳ ದವರೆಗೆ ಬೃಹತ್‌ ಪಾದಯಾತ್ರೆ ನಡೆಯಿತು. ಪಾದಯಾತ್ರೆ ಸಮಿತಿಯು 6ನೇ ವರ್ಷದಲ್ಲಿ ಆಯೋಜಿಸಿದ ಪಾದಯಾತ್ರೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಹೊರಟು, ಸುಮಾರು 8 ಕಿ.ಮೀ. ದೂರದ ಧರ್ಮಸ್ಥಳಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಹೆಜ್ಜೆ ಹಾಕಿದರು. ಭಕ್ತರು ಭಜನೆ ಸಹಿತ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಗುಣಗಾನ ಮಾಡುತ್ತಾ ಸಾಗಿದರು.

ಕರಾವಳಿಯಲ್ಲಿ ಅಫೀಮು, ಡ್ರಗ್ಸ್ ಸಕ್ರಿಯವಾಗಿರುವುದೇ ಅತ್ಯಾಚಾರ ಪ್ರಕರಣಕ್ಕೆ ಕಾರಣ : ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಕರಾವಳಿಯಲ್ಲಿ ಅಫೀಮು ಮಾರಾಟ ಜಾಲ ಸಕ್ರಿಯವಾಗಿರುವುದೇ ಮಂಗಳೂರಿನ ತೋಟ ಬೆಂಗ್ರೆ ಬೀಚ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಅಫೀಮು, ಡ್ರಗ್ಸ್ ನಿಂದ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಈ ಅತ್ಯಾಚಾರ ಘಟನೆಯನ್ನು ತಡೆಗಟ್ಟುವಲ್ಲಿ ಮಂಗಳೂರು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ನಾನು ಘಟನೆಯ ಸಂತ್ರಸ್ತೆಯ ಜೊತೆ ಮಾತನಾಡಿ ಬಂದಿದ್ದೇನೆ ಎಂದು ಹೇಳಿದರು.

ಶ್ರೀರಾಮ ಮಂದಿರ ಪರ ಹೇಳಿಕೆ ನೀಡಿದ ಜನಾರ್ದನ ಪೂಜಾರಿಗೆ ಬೆದರಿಕೆ: ಆಡಿಯೋ ವೈರಲ್

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದು ಇದು ಹಿಂದೂ-ಮುಸ್ಲಿಂ-ಕ್ರೈಸ್ತರ ಇಚ್ಛೆಯೂ ಆಗಿದೆ ಎಂದು ಭಾನುವಾರ ಹೇಳಿಕೆ ನೀಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಅವಹೇಳನ ಮಾಡಿ, ಬೆದರಿಕೆಯೊಡ್ಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇದೆ. ಭಾನುವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಧ್ಯಮದ ಜತೆ ಮಾತನಾಡುವಾಗ ಅಯೋಧ್ಯೆ ರಾಮ ಮಂದಿರ ಪರ ಹೇಳಿಕೆ ನೀಡಿದ್ದರು.

ಪುಟ್ಟ ಆಕಾಶಕಾಯವೊಂದಕ್ಕೆ ಪುತ್ತೂರಿನ ವಿಜ್ಞಾನ ವಿದ್ಯಾರ್ಥಿ ಸ್ವಸ್ತಿಕ್​ ಹೆಸರು!

ಮಂಗಳೂರು: ಪುಟ್ಟ ಆಕಾಶಕಾಯ(ಮೈನರ್ ಪ್ಲ್ಯಾನೆಟ್)ವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಸ್ವಸ್ತಿಕ್ ಪದ್ಮ ಅವರ ಹೆಸರನ್ನಿಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಐಎಸ್ಇಎಫ್ -2018 (ಇಂಟರ್​ನ್ಯಾಷನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್- 2018) ರಲ್ಲಿ ಅವರು ಮಾಡಿದ ಸಾಧನೆಗೆ ಮೆಸಾಚ್ಯುಸೆಟ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲಿಂಕನ್ ಲ್ಯಾಬೋರೇಟರಿ ಆ್ಯಂಡ್ ಇಂಟರ್​ನ್ಯಾಷನಲ್ ಆಸ್ಟ್ರೋನಾಮಿಕಲ್‌ ಯೂನಿಯನ್ ಈ‌ ಗೌರವ ನೀಡಿದೆ.

ಗಣೇಶ ಉತ್ಸವದ ವೇಳೆ ದುರಂತ: ತಲೆ ಮೇಲೆ ಸಿಡಿದ ಪಟಾಕಿ, ಯುವತಿ ಸಾವು

ತಿಪಟೂರು: ಗಣೇಶ ಉತ್ಸವದ ವೇಳೆ ನಡೆದ ಪಟಾಕಿ ದುರಂತದಲ್ಲಿ 21 ವರ್ಷ ಯುವತಿಯೊಬ್ಬಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾನುವಾರ ನಡೆದಿದೆ. ಸಿತಾರ (21) ಮೃತಪಟ್ಟ ಯುವತಿಯೆಂದು ಹೇಳಲಾಗುತ್ತಿದೆ. ಗಣೇಶ ಉತ್ಸವದ ವೇಳೆ ಭಾರೀ ಪ್ರಮಾಣದ ಸಿಡಿಮದ್ದುಗಳನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯೊಂದಿ ಸಿತಾರ ಅವರ ತಲೆ ಮೇಲೆ ಬಿದ್ದು ಸಿಡಿದಿದೆ.

ವನ್ನಳ್ಳಿ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ

ಕುಮಟಾ: ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ನೇತೃತ್ವದಲ್ಲಿ ಪುರಸಭೆ ವತಿಯಿಂದ ವನ್ನಳ್ಳಿ ಕಡಲತೀರದ ಸ್ವಚ್ಛತಾ ಶ್ರಮದಾನ ಭಾನುವಾರ ಕೈಗೊಳ್ಳಲಾಯಿತು. ವನ್ನಳ್ಳಿ ಬೀಚ್ ಎಂದೇ ಹೆಸರಾಗಿದ್ದು, ಇಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾರ್ಯಗಳ ಜತೆಗೆ ಪುರಸಭೆಯಿಂದ ಆಟಿಕೆ ಸಾಮಾನುಗಳನ್ನು ಅಳವಡಿಸಿದ್ದರಿಂದ ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸತೊಡಗಿತ್ತು. ಇದರ ಅಡ್ಡ ಪರಿಣಾಮವೆಂಬಂತೆ ಇಲ್ಲಿನ ಸ್ವಚ್ಛತೆಯ ನಿರ್ವಹಣೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೊಸ ಆಲೋಚನೆ, ಹಾಸನದಲ್ಲಿ ಕಾವೇರಿ ಜಲವಿವಾದ ಬಗೆಹರಿಸಿದ ಗಡ್ಕರಿ!

ಹಾಸನ: ಕರ್ನಾಟಕ ತಮಿಳುನಾಡಿನ ಜಲವಿವಾದಕ್ಕೆ ಪರಿಹಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಹಾರ ಮಾರ್ಗ ಒಂದನ್ನು ಹೇಳಿದ್ದಾರೆ. ಕೇಂದ್ರ‌ ಸರ್ಕಾರದ ಸಂಪೂರ್ಣ ಅನುದಾನದಲ್ಲಿ ಬೃಹತ್‌ ಜಲಾಶಯ ನಿರ್ಮಾಣ ಮಾಡುವ ಮಾತನ್ನಾಡಿದ್ದಾರೆ.
ಆಂಧ್ರ ಪ್ರದೇಶದ‌ ಪೋಲಾವರಂ ಬಳಿ 60 ಸಾವಿರ ಕೋಟಿ ರೂ. ವೆಚ್ಚದ ಡ್ಯಾಂ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಾಸನದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ.

ನೌಕಾಪಡೆಗೆ ಬ್ರಹ್ಮೋಸ್‌ ಬಲ

ಹೊಸದಿಲ್ಲಿ: ದೇಶದ ಸೇನಾ ಪಡೆಗೆ ಇನ್ನಷ್ಟು ಬಲ ನೀಡುವ ಬೆಳವಣಿಗೆಯಾಗಿ ರಕ್ಷಣಾ ಸಚಿವಾಲಯವು 3 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಿಗೆ ನೀಡಿದೆ. ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ಹಾಗೂ ಶಸ್ತ್ರ ಸಜ್ಜಿತ ರಕ್ಷಣಾ ವಾಹನವನ್ನೂ ಈ ಮೊತ್ತದಲ್ಲಿ ಖರೀದಿಸಲಾಗುತ್ತದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವ ದಲ್ಲಿ ನಡೆದ ರಕ್ಷಣಾ ಖರೀದಿ ಸಮಿತಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.