ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ಜೋಡಿಗಳಾದ ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಜೋಡಿಯ ಮನೆಗೆ ಇಂದು ಬೆಳಗ್ಗೆ ಹೊಸ ಅತಿಥಿಯ ಆಗಮನವಾಗಿದೆ. ರಾಧಿಕಾ ಪಂಡಿತ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ ಬೆಳಗ್ಗೆ 6.20 ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯದಿಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

Comments

comments

ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸೋರಿಕೆ- ಆಸುಪಾಸಿನಲ್ಲಿ ಬೆಂಕಿ ಉರಿಸದಂತೆ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಗ್ಯಾಸ್ ಸೋರಿಕೆಯಾದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.ಭಾರತ್ ಗ್ಯಾಸ್ ಸಂಸ್ಥೆಗೆ ಸೇರಿದ್ದ ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಇಂದು ಮುಂಜಾನೆ ಉಪ್ಪಿನಂಗಡಿ ಬಳಿಯ ಬೆದ್ರೋಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಬಿದ್ದ ರಭಸಕ್ಕೆ ಟ್ಯಾಂಕರಿನಲ್ಲಿದ್ದ ಅಪಾರ ಪ್ರಮಾಣದ ಗ್ಯಾಸ್ ಸೋರಿಕೆಯಾಗುತ್ತಿದೆ

Comments

comments

ಸುರಂಗದೊಳಗೆ ತೆರಳಿದಾತ ಮೃತ್ಯು

ಉಪ್ಪಳ:ಬಾಯಾರುಪದವು ಸಮೀಪ ಧರ್ಮತ್ತಡ್ಕ ಬಾಳಿಕೆಯಲ್ಲಿ ಮುಳ್ಳುಹಂದಿ ಬೇಟೆಗೆ ಸುರಂಗದೊಳಗೆ ತೆರಳಿದ ಧರ್ಮತ್ತಡ್ಕ ಗುಂಪೆ ನಿವಾಸಿ, ಕೂಲಿ ಕಾರ್ಮಿಕ ರಮೇಶ(35) ಮಣ್ಣು ಕುಸಿದು ಹೊರಬರಲಾರದೆ ಮೃತಪಟ್ಟಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಸತತ 13 ಗಂಟೆ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.

Comments

comments

ಅಂಬಿಗೊಂದು ನ್ಯಾಯ, ವಿಷ್ಣುವಿಗೊಂದು ನ್ಯಾಯವೇ – ಮತ್ತೆ ಸಿಡಿದ ಅನಿರುದ್ಧ್

ಬೆಂಗಳೂರು: ಅಪ್ಪಾಜಿ ಶಾರೀರಕವಾಗಿ ದೂರವಾಗಿ ಒಂಭತ್ತು ವರ್ಷಗಳು ಕಳೆದಿವೆ. ಇದೂವರೆಗೆ ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಬೆಂಗಳೂರಲ್ಲಿ ಸಿನಿಮಾ ಮತ್ತು ಟಿಲಿವಿಷನ್ ಸಂಸ್ಥೆಯ ಶಾಖೆ ತೆರೆಯಬೇಕು ಎಂದು ಮತ್ತೊಮ್ಮೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಆಗ್ರಹಿಸಿದ್ದಾರೆ.ಶುಕ್ರವಾರ ನಡೆದ ಸಭೆಯಲ್ಲಿ ಮೈಸೂರಿನಲ್ಲಿ ಅಂಬರೀಶ್ ಅವರ ಹೆಸರಲ್ಲಿ ಫಿಲ್ಮ್ ಸಿಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಪ್ಪಿಗೆ ಸೂಚಿಸಿದ್ದಾರೆ. ಆದ್ರೆ ಅಪ್ಪಾಜಿ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ

Comments

comments

ಮೊದಲ ಜಪಾನ್, ಅಮೆರಿಕ, ಇಂಡಿಯಾ ಸ್ನೇಹಕೂಟಕ್ಕೆ ‘ಜೈ’ಹೋ ಎಂದ ಮೋದಿ

ಬ್ಯುನೋಸ್ ಏರಿಸ್(ಅರ್ಜೆಂಟೀನಾ), ಡಿಸೆಂಬರ್ 01: ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಸಲುವಾಗಿ ಸೃಷ್ಟಿಯಾದ ಜಪಾನ, ಅಮೆರಿಕ ಮತ್ತು ಭಾರತದ ಮೊದಲ ಸ್ನೇಹಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ‘ಜೈ’ ಎಂದು ನಾಮಕರಣ ಮಾಡಿದ್ದಾರೆ.ಜಪಾನ್, ಅಮೆರಿಕ ಮತ್ತು ಇಂಡಿಯಾ ಈ ಮೂರು ದೇಶಗಳ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ರಚಿಸಿದ ಈ ಪದಕ್ಕೆ ‘ಜಯವಾಗಲಿ’ ಎಂಬ ಅರ್ಥವೂ ಇರುವುದರಿಂದ ಈ ಪದ ಹೆಚ್ಚು ಅರ್ಥಪೂರ್ಣವೆನ್ನಿಸಿದೆ.

Comments

comments

ಶೀಘ್ರದಲ್ಲೇ ಮುಂಬೈನಿಂದ ಯುಎಇಗೆ ಅಂಡರ್ ವಾಟರ್ ರೈಲು ಸಂಚಾರ!

ನವದೆಹಲಿ: ವಿಶ್ವದಲ್ಲೇ ನೂತನ ಆವಿಷ್ಕಾರಗಳಿಗೆ ಹೆಸರಾಗಿರುವ ಯುಎಇ, ಇದೀಗ ಮುಂಬೈನಿಂದ ಯುಎಇಗೆ ನೀರಿನೊಳಗೆ ಪೈಪ್ಲೈನ್ ಮೂಲಕ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸಿದೆ.ಈಗಾಗಲೇ ಹೈಪರ್ ಲೂಪ್ ಮತ್ತು ಚಾಲಕ ರಹಿತ ಹಾರುವ ಕಾರುಗಳ ಸೃಷ್ಟಿಯ ನಂತರ ಅಂಡರ್ ವಾಟರ್ ರೈಲು ಸೇವೆ ಆರಂಭಿಸಲು ಯೋಜನೆ ರೂಪಿಸಿದೆ. ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಯುಎಇ ಯ ಫುಜೈರಹ್‌ ನಗರದಿಂದ ಭಾರತದ ಮುಂಬಯಿಗೆ ಸಮುದ್ರದೊಳಗೆ ರೈಲಿನಲ್ಲಿ ಸಂಚರಿಸಬಹುದಾಗಿದೆ.

Comments

comments

ಬಿಂದ್ರಾಗೆ ವಿಶ್ವದ ಅತ್ಯುನ್ನತ ಶೂಟಿಂಗ್​​ ಪ್ರಶಸ್ತಿ… ಗೌರವ ಪಡೆದ ಮೊದಲ ಭಾರತೀಯ

ನವದೆಹಲಿ: 2008ರ ಬೀಜಿಂಗ್ ಒಲಂಪಿಕ್ಸ್​ನಲ್ಲಿ 10 ಮೀಟರ್​ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ನೂತನ ದಾಖಲೆ ಬರೆದಿದ್ದ ಭಾರತದ ಶೂಟರ್​ ಅಭಿನವ್​ ಬಿಂದ್ರಾಗೆ ವಿಶ್ವದ ಅತ್ಯುನ್ನತ ಶೂಟಿಂಗ್ ಪ್ರಶಸ್ತಿ ” ದಿ ಬ್ಲೂ ಕ್ರಾಸ್” ಲಭಿಸಿದೆ.ಈ ಪ್ರಶಸ್ತಿ ಪಡೆದ ಭಾರತದ ಮೊದಲ ಶೂಟರ್​ ಎಂಬ ಖ್ಯಾತಿಗೆ ಬಿಂದ್ರಾ ಪಾತ್ರರಾಗಿದ್ದು, ತಮಗೆ ಸಿಕ್ಕಿರುವ ಅತ್ಯುನ್ನತ ಪ್ರಶಸ್ತಿ ಬ್ಲೂ ಕ್ರಾಸ್ ಪುರಸ್ಕಾರದ ಫೋಟೋ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಹಾಕಿ ಸಂತಸ ಹಂಚಿಕೊಂಡಿದ್ದಾರೆ.

Comments

comments

ದಿಲ್ಲಿ ಚಲೋ’: ವಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯ್ತು ರೈತರ ಬೃಹತ್ ರ್ಯಾಲಿ

ನವದೆಹಲಿ: ಸಾಲಮನ್ನಾ, ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ರೈತರು ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ರೈತರ ಈ ಬೃಹತ್…ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ರೈತರು ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದ್ದರು. ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ತಡೆಯುವ ಮೂಲಕ ಪ್ರತಿಭಟನೆ ಅಂತ್ಯಗೊಂಡಿತ್ತು.

Comments

comments

ರಜನಿ’ ಅಭಿಯನದ 2.0 ಚಿತ್ರಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿಯನದ ಬಹುನಿರೀಕ್ಷಿತ 2.0 ಚಿತ್ರ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಇತ್ತೀಚಿಗೆ ರೆಬೆಲ್ ಸ್ಟಾರ್ ಅಂಬರೀಷ್ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ರಜನಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯ ಕಂಡುಬರುತ್ತಿದೆ.ಅಂಬರೀಷ್ ಹಾಗೂ ರಜನಿಕಾಂತ್ ಉತ್ತಮ ಗೆಳೆಯರಾಗಿದ್ದರು. ಅಂಬಿ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಬಂದಿದ್ದ ರಜನಿಕಾಂತ್, ತಮ್ಮ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಮಾಡದಂತೆ ಕೇಳಿಕೊಂಡಿದ್ದರ

Comments

comments

ಸೈನ್ಸ್ ವಿದ್ಯಾರ್ಥಿಗಳಿಗೆ ಬ್ಯಾಡ್ ನ್ಯೂಸ್!

ಬೆಂಗಳೂರು: ವಿಜ್ಞಾನದ ವಿದ್ಯಾರ್ಥಿಗಳು ಅಂದರೆ ಸಂಶೋಧನೆ, ಪ್ರಾಕ್ಟಿಕಲ್ ವರ್ಕ್ ಮಾಡೋದು ಸಹಜ. ವಿವಿಧ ಪ್ರಾಣಿಗಳು, ಜಂತುಗಳನ್ನು ಬಳಸಿ ಯಾವಾಗಲು ಲ್ಯಾಬ್‍ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಇದೀಗ ವಿಜ್ಞಾನ ಓದೋ ವಿದ್ಯಾರ್ಥಿಗಳು ಲ್ಯಾಬ್‍ಗಳಿಗೆ ಜೀವಂತ ಪ್ರಾಣಿ ಮತ್ತು ಪಕ್ಷಿ ತರುವಂತಿಲ್ಲ ಎಂದು ಪೇಟಾ ದೂರು ಕೊಟ್ಟಿದೆ.ಸೈನ್ಸ್ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಇದು ಬೇಸರದ ಸುದ್ದಿಯಾಗಿದೆ.

Comments

comments