ಐಡಿಯಲ್ ಐಸ್ಕ್ರೀಂ ಮುಡಿಗೆ ಎಂಟು ಪದಕಗಳ ಗರಿ

ಕರಾವಳಿಯ ಜನರ ಅಚ್ಚು ಮೆಚ್ಚಿನ ಐಸ್‍ಕ್ರೀಂ ಐಡಿಯಲ್ ಐಸ್‍ಕ್ರೀಂ. ರುಚಿಯಾದ ಉತ್ತಮ ಗುಣಮಟ್ಟದ ಐಸ್‍ಕ್ರೀಂ‍ಗೆ ಹೆಸರುವಾಸಿಯಾಗಿದೆ ಐಡಿಯಲ್ ಐಸ್‍ಕ್ರೀಂ. ಪುಟ್ಟ ಮಗುವಿನಿಂದ ಹಿಡಿದು ಯಾರಲ್ಲಿ ಕೇಳಿದರೂ ಐಡಿಯಲ್ ಐಸ್‍ಕ್ರೀಂನ್ನು ಇಷ್ಟ ಪಡದವರಿಲ್ಲ. ಇದು ಐಡಿಯಲ್ ಐಸ್‍ಕ್ರೀಂ ಗೆ ಜನ ಕೊಟ್ಟ ಮನ್ನಣೆಯಾದರೆ ಇದೀಗ ಐಡಿಯಲ್ ಮುಡಿಗೆ ಇನ್ನೊಂದು ಗರಿಯೇರಿದೆ.

Source: Facebook Page of Ideal Ice Cream

‘ದ ಗ್ರೇಟ್ ಇಂಡಿಯನ್ ಐಸ್ಕ್ರೀಂ ಕಾಂಪಿಟೀಷನ್‍ನಲ್ಲಿ ಎಂಟು ಪದಕಗಳನ್ನು ಗೆದ್ದಿದೆ. ಸುಮಾರು ೧೦೩ ಸ್ಪರ್ಧಿಗಳಿದ್ದ ಈ ಪ್ರತಿಷ್ಟಿತ ಸ್ಪರ್ಧೆಯಲ್ಲಿ ಐಡಿಯಲ್ ಉತ್ಪನ್ನಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಒಟ್ಟು ಎಂಟು ಮೆಡಲ್‍ಗಳನ್ನು ಗೆದ್ದಿದ್ದು ಅದರಲ್ಲಿ ಮೂರು ವೆಸ್ಟರ್ನ್ ಇಂಡಿಯಾ, ನಾಲ್ಕು ಚಿನ್ನದ ಮೆಡಲ್ ಹಾಗೂ ಒಂದು ಬೆಳ್ಳಿಯ ಪದಕವಾಗಿದೆ. ಅದರಲ್ಲಿ ‘ಬೆಸ್ಟ್ ಇನ್ ಕ್ಲಾಸ್ ಫಾರ್ ಸಾರ್ಬೆಟ್‍ನಲ್ಲಿ’ ಮ್ಯಾಂಗೋ ಸಾರ್ಬೆಟ್, ‘ಬೆಸ್ಟ್ ಇನ್ ಕ್ಲಾಸ್ ಫಾರ್ ಇನ್ನೋವೇಷನ್‍ನಲ್ಲಿ’ ಮಾರ್ಜಿ ಪಾನ್ , ‘ಬೆಸ್ಟ್ ಇನ್ ಕ್ಲಾಸ್ ಫಾರ್ ವೆನಿಲ್ಲಾ’ ದಲ್ಲಿ ಫ್ರೋಜನ್ ಡೆಸರ್ಟ್‍ ಪ್ರಶಸ್ತಿಗಳನ್ನು ಗೆದ್ದಿದೆ. ವೆನಿಲ್ಲಾ ಐಸ್‍ಕ್ರೀಂ, ಸಾರ್ಬೆಟ್, ವೆನಿಲ್ಲಾ ಫ್ರೋಜನ್ ಡೆಸರ್ಟ್, ಮೋಸ್ಟ್ ಇನ್ನೋವೇಟಿವ್ ಚಿನ್ನದ ಪದಕಗಳಿಸಿದೆ. ಅಲ್ಲದೇ ‘ಚಾಕಲೇಟ್ ಐಸ್‍ಕ್ರೀಂ’ ಬೆಳ್ಳಿ ಪದಕ ಗೆದ್ದಿದೆ.

ಐಡಿಯಲ್ ಟೀಂನ ಎಲ್ಲರ ಪ್ರೀತಿ, ಸಹಕಾರ ಹಾಗೂ ಗ್ರಾಹಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ ಎಂದು ಐಡಿಯಲ್ ಐಸ್‍ಕ್ರೀಂ ಮಾಲಕರಾದ ಮುಖುಂದ್ ಕಾಮತ್ ಹರ್ಷವ್ಯಕ್ತಪಡಿಸುತ್ತಾರೆ.